ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಹಿರೇಮಗಳೂರಿನಲ್ಲಿ ಹುಟ್ಟಿದ
ಚೆನ್ನಕೇಶವ ಅಯ್ಯಂಗಾರ್ ಅವರು ‘ಮಾಸ್ಟರ್ ಆಫ್ ಓರಿಯೆಂಟಲ್
ಲರ್ನಿಂಗ್’ ಪದವಿಯನ್ನು ಪಡೆದ ಕನ್ನಡಿಗರಲ್ಲಿ ಮೊದಲಿಗರು.
ಅವರು ಪ್ರಾಚೀನ ಕನ್ನಡ ಸಾಹಿತ್ಯದ ಪ್ರಚಾರಕ್ಕಾಗಿ ಅವಿರತವಾಗಿ ಶ್ರಮಿಸಿದರು. ಮೈಸೂರಿನ
‘ಟೀಚರ್ಸ್ ಟ್ರೈನಿಂಗ್ ಕಾಲೆಜ್’
ಮತ್ತು ಧಾರವಾಡದ ‘ಕರ್ನಾಟಕ ಕಾಲೇಜು’ಗಳಲ್ಲಿ ಸ್ವಲ್ಪ ಕಾಲ ಕೆಲಸ ಮಾಡಿದ ನಂತರ, ಅವರು ಮದ್ರಾಸ್ ವಿಶ್ವವಿದ್ಯಾಲಯದ
‘ಓರಿಯೆಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್’ನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇರಿಕೊಂಡರು.
‘ಕನ್ನಡ ಸಾಹಿತ್ಯಪರಿಷತ್’ನ
ಸಾಹಿತ್ಯ ವಿಭಾಗದ ಕಾರ್ಯದರ್ಶಿಯ ಕೆಲಸವೂ ಸೇರಿದಂತೆ, ಅನೇಕ ಜವಾಬ್ದಾರಿಯುತ ಕೆಲಸಗಳನ್ನು ಅವರು ನಿರ್ವಹಿಸಿದರು.
ಅವರಿಗೆ ಆರ್. ನರಸಿಂಹಾಚಾರ್, ಎಂ.ಎ. ರಾಮಾನುಜ ಅಯ್ಯಂಗಾರ್ ಮುಂತಾದ ವಿದ್ವಾಂಸರ ನಿಕಟ ಪರಿಚಯವಿತ್ತು.
ಪ್ರಸಿದ್ಧ ಕವಿಯಾದ ಮುದ್ದಣನ ವೈಯಕ್ತಿಕ ಪರಿಚಯವನ್ನು ಪಡೆದಿದ್ದ ಅಯ್ಯಂಗಾರ್ಯರು ಅವನ
‘ಅದ್ಭುತ ರಾಮಾಯಣ’
ಕೃತಿಯ ಮೂಲ ಹಸ್ತಪ್ರತಿಯನ್ನು ಇಟ್ಟುಕೊಂಡಿದ್ದರು.
ಮದ್ರಾಸು ವಿಶ್ವವಿದ್ಯಾಲಯವು ಪ್ರಕಟಿಸಿದ, ಕೇಶಿರಾಜನ
‘ಶಬ್ದಮಣಿದರ್ಪಣ’ದ
ಹೊಸ ಆವೃತ್ತಿಗೆ ಬರೆದ ಸುದೀರ್ಘ ಮುನ್ನಡಿಯು, ಚೆನ್ನಕೇಶವ ಅಯ್ಯಂಗಾರ್ ಅವರ ಮಹತ್ವದ ಕೊಡುಗೆ. ಆ ಆವೃತ್ತಿಯನ್ನು
ಸಂಪಾದಿಸಿದ ಎ. ವೆಂಕಟರಾವ್ ಮತ್ತು ಎಚ್. ಶೇಷಯ್ಯಂಗಾರ್ ಅವರು ಮುನ್ನುಡಿ ಬರೆಯುವ ಕೆಲಸವನ್ನು ಇವರಿಗೆ
ವಹಿಸಿದರು. ಆ ಮುನ್ನುಡಿಯು 112 ಪುಟಗಳಷ್ಟು ದೀರ್ಘವಾಗಿದ್ದು, ಅನೇಕ ಮಹತ್ವದ ವಿಷಯಗಳನ್ನು ಒಳಗೊಂಡಿದೆ.
ಈ ಮುನ್ನುಡಿಯಲ್ಲದೆ, ಅಯ್ಯಂಗಾರ್ ಅವರು ಪ್ರಾಚೀನ ಕನ್ನಡ ಸಾಹಿತ್ಯವನ್ನು ಕುರಿತ ಲೇಖನಗಳನ್ನು ಇಂಗ್ಲಿಷ್
ಮತ್ತು ಕನ್ನಡಗಳಲ್ಲಿ ಬರೆದಿದ್ದಾರೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಪಟ್ಟಿ ಮಾಡಲಾಗಿದೆ:
- ‘Kannada Literature’,
Annals of Oriental Reseach, 3-1
- ‘Jainism in Kannada Literature’, All India Oriental Conference, 9th Session
- ‘Jagannatha Vijaya and its Historical Implications’, A.I.O.C., Summaries, 1941.
- ‘Chronological History in Kannada Literature’, A.I.O.C., 2nd Session
- ‘Historical Implications of Gadayuddha by
Ranna Kavi, a Kannada poet of the 10th century’,
(Allegory of Rashtrakuta Indra-4, A.I.O.C.-16, 1951.
- ‘ಕನ್ನಡ
ಸಾಹಿತ್ಯ’, Annals of Oriental Research, 1-1, 2 and 3-1
- ‘ಹನ್ನೊಂದನೆಯ
ಶತಮಾನದ ಕನ್ನಡ ಸಾಹಿತ್ಯ’, ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ, 14-3
|